ಸೋಮವಾರ, ಜನವರಿ 5, 2015

ಸ್ವಾಭಿಮಾನಿ

ಕಂಡಿತೊಂದು ಕನಸು
ಹಿಂದಿಲ್ಲದ ಮುಂದಿಲ್ಲದ
ಗೊತ್ತು ಗುರಿಯಿಲ್ಲದ 
ಕೆಲಸಕ್ಕೆ ಬಾರದ್ದು

ಅಲ್ಲೊಬ್ಬ ಹುಡುಗ 
ಕುಣಿಯುವಷ್ಟು ಕುಣಿದ 
ಕಲ್ಲುಮಣ್ಣು ಕೂಡಿದ ನೆಲದಲ್ಲಿ
ರಕ್ತ ಸುರಿಸಿದ

ಹೇಳಿ ಕೇಳಿ ನೆರೆಮನೆಯವ
ಸುಮ್ಮನೆ ರೇಗುವುದೆ?
ಕಿತ್ತ ಬೇಲಿಗೂಟ ನೆಟ್ಟ
ನಮ್ಮ ಮನೆಯ ಅಂಗಳದೊಳಗೆ

ಇತ್ತ ಇದ್ದನೊಬ್ಬ ಸ್ವಾಭಿಮಾನಿ
ಕೇಳಲೋದ ಅವನ ಮನೆಗೆ
ಅಂದನವ ಅದೆನ್ನ ಮನೆ
ಹೋಗು ನೀ ಆಚೆಗೆ

ಕೊಟ್ಟೆ ಕೊಟ್ಟೆ ಎಲ್ಲಾ ಕೊಟ್ಟೆ
ಅಂದೆ ನಿನಗೆ ಎಲ್ಲವ
ಅಂದನಿವ ಮೆಲ್ಲಗೆ
ಕತ್ತಿ ಹಿಡಿದು ನಿಂತನವ ಬೆನ್ನ ಹಿಂದಕೆ

ಕೊನೆಯಾಯಿತಲ್ಲಿಗೆ ಕನಸೊಂದು
ಶುರುವಾಯಿತು ಸಂಕ್ರಮಣದ ಸಮರ
ನ್ಯಾಯ ನಮ್ಮದಲ್ಲವೇನು
ಮುನ್ನಡೆಯಲೇಕೆ ಅಂಜಿಕೆ??

ಪಾಪಿಲೋಕ ಅಲ್ಲಿಹುದು
ಉಗ್ರರೂಪ ತಾಳುತಿಹುದು
ಕಂತ್ರಿ ಕೆಲಸ ಮಾಡುತಿಹುದು
ನಾವು ನರಸಿಂಹರು ಎಚ್ಚರ

ನ್ಯಾಯ ನೀತಿ ಮೆರೆದ ನಾಡಿದು
ಕೈ ಮುಗಿದು ಮೆಟ್ಟು ಈ ಭವ್ಯ ಭೂಮಿಯ
ಕೆಣಕಿದರೆ ಬಿಡೆವು ತಕ್ಕಶಾಸ್ತಿಯ ಮಾಡುವೆವು
ನೆನಪಿರಲಿ ಇದು ನಿಮ್ಮ ಮನದೊಳಗೆ...



--- ನಾಗಭೂಷಣ ಗುಮಗೋಡು.

http://www.facebook.com/kadalatheera