ಗುರುವಾರ, ಮೇ 7, 2015

ಮರೆ

ಹೃದಯದಿಂದ ಹಾರಿದ ಚಿಟ್ಟೆಯೊಂದು
ಮಾಮರದ ಮೇಲೆ ಕುಳಿತು..
ಗೇಲಿ ಮಾಡಿ ನಗುತಿದೆ
ಬಾ ಎಂದು ಕೈಬೀಸಿ ಕರೆಯುತಿದೆ..
ಮುತ್ತಂತೆ ಸಾಕಿದ್ದೆ ನಾನಿನ್ನ...
ನೀ ಹಾರಿದೆ ಮುಳ್ಳಂತೆ ಚುಚ್ಚಿ ನನ್ನ..
ಸಿಹಿ ಅಲ್ಲವಿದು ಕಹಿಯಾದ ನೋವು..
ಕೇಳಿದೆಲ್ಲಾ ಕೊಟ್ಟೆ ನೀ ಬಯಸದಿರೆ...
ಹೋದೆ ನೀ ಹೇಳದೆ ಕಾರಣ.
ನಿನ್ನ ಮಾತು ನನಗೆ ಸಾವಿರ ಮುತ್ತು..
ಕೊಟ್ಟೆ ನಿನಗೆ ಎರಡು ರೆಕ್ಕೆ ಹೆಚ್ಚು..
ಹಾರಿ ಹೋಗೋ ಮುನ್ನ ನೆನೆಸಿಕೊಂಡೆಯಾ ಒಮ್ಮೆ!??
ಕಿಂಚಿತ್ತು ಬಾರದೆ ನನ್ನಿರವು..!
ಬಣ್ಣ ಬಣ್ಣದ ಲೋಕದ ಬುದ್ದಿ ನಿನಗೇಕೆ ಬಂತು?
ಅರ್ಥವಿಲ್ಲದ ಕಾರಣಕ್ಕೆ ತಾತ್ಪರ್ಯವಿದೆಯೇ?
ಹೇಳದಿದ್ದರೇನು ನಿನ್ನತನವ ನೀ ತೋರಿದೆ..
ನಾ ಮೆಚ್ಚಿದೆ ಲೋಕದಂತರಂಗದ ಅಂಕುಡೊಂಕಾ...!
ನಾ ಸಾಗುವೆ ಮರೆತು ನಿನ್ನ ನನ್ನೆದುರ ಹಾದಿಯಲಿ,
ಇನ್ನೆಂದು ಕಾಣಿಸದಿರು ಮತ್ತೆ ಚುಚ್ಚಲು.!!!

- ನಾಗಭೂಷಣ ಗುಮಗೋಡು.