ತುಸು ನಗುವು ಅವಳ ತುಟಿಗಳಲಿ
ನನ್ನ ಮಾತು ಕೇಳಿಸಿದಾಗ
ತುಂಬಿತ್ತು ಕಣ್ಣಹನಿ ಕೆಂಪೇರಿದ ಕಣ್ಣಲ್ಲಿ
ನನ್ನ ಮನ ನೊಂದು ಬೆಂದಾಗ.
ಜೀವಕ್ಕೆ ಜೊತೆಯಾದ ನಿನ್ನ ಒಲವು..
ಕಷ್ಟ ಬಂದರೂ ಮೆಟ್ಟಿನಿಲ್ಲುವ ನಿನ್ನ ನಿಲುವು.
ಪ್ರಿಯಕರನ ಕೊರಳ ಬಂಧಿಸಿದಾಗ
ಮಧುರ ಮಾತಿನ ಬಾಡೂಟ.
ತೋರಗೊಡೆ ನೀ ನಿನ್ನ ಪ್ರೇಮವ,
ತೋರಿದೆ ನೀ ನನ್ನ ಹೃದಯದಿ..
ಕಡಲ ಅಲೆಗಳಂತೆ ರಭಸದಲಿ..
ಈ ನಿನ್ನ ಪ್ರೀತಿ ಪ್ರಶಾಂತ ಕಾಲುವೆಯಂತೆ.
ನಿನ್ನ ಮುದ್ದಿನ ಮಾತೊಂದು ಸಾಕು
ಅದೇ ನನ್ನ ಸುಟ್ಟ ಭಾವನೆಗಳಿಗೆ ಮದ್ದು..
ನಿನ್ನ ನಗು ನನ್ನೆದೆಯ ದಾರಿದೀಪ..
ನೀ ಕೊಟ್ಟ ಸಿಹಿಮುತ್ತು ನನಗದೇ ಆಶಾಕಿರಣ.
ನೀ ಬರೆದೆ ಪ್ರೇಮಕಾವ್ಯವನು..
ತಣ್ಣನೆ ಹಾಕಿದೆ ನಾ ಕೆಳಗೊಂದು ಸಹಿ..
ಚಂದನದ ಗೊಂಬೆಗೆ ಕುಂಕುಮದ ತಿಲಕ..
ಎರಡು ಹೃದಯಗಳ ಬೆಸುಗೆಗೆ ನೀ ಬರೆದೆ ಮುನ್ನುಡಿ.
- ನಾಗಭೂಷಣ ಗುಮಗೋಡು.
chenaagide baraha.., heege munduvariyali
ಪ್ರತ್ಯುತ್ತರಅಳಿಸಿThank you chaitrakka..
ಅಳಿಸಿ